ಉತ್ತಮ ಅಂಕಗಳನ್ನು ಗಳಿಸಲು ಈ ಮಾರ್ಗಗಳನ್ನು ಅನುಸರಿಸಿದರೆ ಸಾಕು..!!
ಉತ್ತಮ ಅಂಕ ಗಳಿಸಲು ಈ ಮಾರ್ಗ ಒಂದಿದ್ದರೆ ಸಾಕು
ವಿ.ಟಿ.ಯು ಪರೀಕ್ಷೆಗಳು ಇನ್ನೇನು ಆರಂಭವಾಗಲಿದ್ದು ದಿನಗಣನೆ ಆರಂಭವಾಗಿದೆ.ವಿ.ಟಿ.ಯು ಜಾಲತಾಣದಲ್ಲಿ ಪರೀಕ್ಷಾ ವೇಳಪಟ್ಟಿಯು ಲಭ್ಯವಿದೆ.
ಇಂಜಿನಿಯರಿಂಗ ಕಬ್ಬಿಣದ ಕಡಲೆ ಏನಲ್ಲಾ.ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಳು ಆರಂಭವಾಗುತ್ತಿದ್ದಂತೆಯೇ ಆಕಾಶವೇ ತಲೆ ಮೆಲೆ ಬಿದ್ದಂತೆ ವರ್ತಿಸುತ್ತಾರೆ.ಇನ್ನೂ ಕೆಲವು ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುವುದನ್ನೂ ನಾನು ನೋಡಿದ್ದೇನೆ.

ಯೋಜನಾ ಬದ್ಧವಾಗಿ ಅಧ್ಯಯನ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನುವುದನ್ನು ವಿದ್ಯಾರ್ಥಿಗಳು ಮನಗಾಣಬೇಕು.ಉತ್ತಮ ತಯಾರಿ ಮತ್ತು ಪರಿಶ್ರಮದಿಂದ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ಸಹಾಯಕಾರಿಯಾಗುತ್ತದೆ.
ಓದು ಒಂದು ತಪಸ್ಸು. ಯಾವುದೇ ಅಡೆತಡೆಗಳಿಲ್ಲದೇ, ಏಕಾಗ್ರತೆಯಿಂದ ದಿನಕ್ಕೆ ನಾಲ್ಕು ಗಂಟೆ ಓದುವುದು- ಬರೆಯುವುದು ಮಾಡಬೇಕು. ಇದರಿಂದ ನಮ್ಮ ಗುರಿಯ ಅಂಕವನ್ನು ಪಡೆಯಬಹುದು' ಈಗಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೇಳಿದರೆ ಈ ಮಾತು ತಮಾಷೆಯಾಗಿ ಕಾಣುತ್ತದೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್,ವಾಟ್ಸಾಪ್ ನ ಹಾವಳಿಯಲ್ಲಿ ವಿದ್ಯಾರ್ಥಿಗಳು ತೇಲಿ ಹೋಗಿದ್ದಾರೆ.ಆದ್ರೆ ಇವುಗಳನ್ನೇ ಅಸ್ತ್ರಗಳನ್ನಾಗಿ ಬಳಸಿಕೊಂಡು ಕ್ರಮಬದ್ಧವಾದ ಅಧ್ಯಯನ ನಡೆಸಲು ಸಾಧ್ಯವಿದೆ.
ಫೇಸ್ಬುಕ್ ಮತ್ತು ವಾಟ್ಸಾಪ್ ಗಳಲ್ಲಿ ಅನಗತ್ಯ ಸಂವಹಣ ನಡೆಸುವುದಕ್ಕಿಂತ ಅದರಲ್ಲಿ ಕೆಲವು ಧನಾತ್ಮಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಗ್ರುಪ್ಗಳನ್ನು ರಚನೆ ಮಾಡಿ ಅದರಲ್ಲಿ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಂಚಿ ಅವುಗಳನ್ನು ಇತರ ವಿದ್ಯಾರ್ಥಿಗಳ ಜೊತೆ ಇತ್ಯರ್ಥ ಮಾಡಿಕೊಳ್ಳಬಹುದು.
ವಾಟ್ಸಾಪ್ ಗಳಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕೊಟ್ಟು ಅವುಗಳನ್ನು ನಿಗದಿಪಡಿಸಿದ ಸಮಯದಲ್ಲಿ ಇತ್ಯರ್ಥ ಮಾಡಿಕೊಳ್ಳುವ ಸ್ಪರ್ದೆಗಳನ್ನು ಮಾಡಬಹುದು.
ವಿಷಯಕ್ಕೆ ಸಂಬಂಧಿಸಿದ ಚಿತ್ರವನ್ನು ಹಾಕಿ ಅದರ ಕುರಿತು ವಿಷ್ಲೇಶಣೆ ಮಾಡಬಹುದು.
ಸಾಮಾಜಿಕ ಜಾಲತಾಣಗಳು ವರವೂ ಹೌದು ಶಾಪವೂ ಹೌದು.
ಯಾವುದೋ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಮಾಡುಲ್ನಲ್ಲಿ ಬರುವ ಮತ್ತು ಒಂದು ನಿಗದಿತ ಪ್ರಶ್ನೆಯ ಉತ್ತರದಲ್ಲಿ ಬರುವ ಕೀ ಟರ್ಮ್ಸ್ ಗಳನ್ನು ಪಟ್ಟಿ ಮಾಡಿರಿ.

ನಿಮ್ಮ ದೈನಂದಿನ ಚಟುವಟಿಕೆಗಳನ್ನು ಹೊರತು ಪಡಿಸಿ ಅಧ್ಯಯನ ಕ್ಕೋಸ್ಕರ ಒಂದು ನಿಗದಿತ ವೇಳಾಪಟ್ಟಿಯನ್ನು ರಚಿಸಿ ಆತ್ಮವಿಶ್ವಾಸದಿಂದ ಓದಿ.
ಓದುವ ಸಮಯ ಸ್ವಲ್ಪವೇ ಆದ್ರೂ ಶ್ರದ್ಧೆಯಿಂದ ಓದಿ.ಚಿತ್ರಗಳನ್ನು ಪದೇ ಪದೇ ತೆಗೆದು ಅಭ್ಯಾಸ ಮಾಡಬೇಕು.
ಪ್ರಿಯ ವಿದ್ಯಾರ್ಥಿಗಳೇ ಉತ್ತಮ ಅಂಕಗಳನ್ನು ಪಡೆಯಲು ಅಭ್ಯಾಸ,ಪುನರಾವರ್ತನೆ ಮತ್ತು ಆತ್ಮವಿಸ್ವಾಸದಿಂದ ಪರೀಕ್ಷೆಗಳನ್ನು ಎದುರಿಸುವುದು.
ನಿಮಗೆಲ್ಲಾ ಶುಭವಾಗಲಿ.
-ಪ್ರೊ.ಆನಂದ ಮನ್ನಿಕೇರಿ.